ನಮ್ಮ ವಾಟ್ಸಾಪ್ ಗುಂಪು ಸೇರಲು ಕ್ಲಿಕ್ ಮಾಡಿ

ಧರ್ಮಸ್ಥಳ ಪ್ರಕರಣ: ಉಜಿರೆ ಗ್ರಾಮದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಬಂದೂಕು, ಎರಡು ತಲವಾರು ವಶ




ಧರ್ಮಸ್ಥಳ : ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಕ್ರ:39/2025 (ಬಿಎನ್ಎಸ್ 2023) ಪ್ರಕಾರ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡ (SIT)ವು ಆ.26ರಂದು ಉಜಿರೆ ಗ್ರಾಮದ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ಶೋಧ ನಡೆಸಿತ್ತು ಈ ಸಂದರ್ಭ ದೊರೆತ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.


ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದು, ಪಂಚರು, ಸಿಬ್ಬಂದಿ, ಸೋಕೋ ಅಧಿಕಾರಿಗಳು ಹಾಗೂ ಎಸ್ಐಟಿ ತಂಡದ ಸದಸ್ಯರ ಸಮ್ಮುಖದಲ್ಲಿ ಶೋಧ ಕಾರ್ಯಾಚರಣೆ ನಡೆಯಿತು. ಈ ವೇಳೆ ಮನೆಯಿಂದ ಒಂದು ಬಂದೂಕು ಮತ್ತು ಎರಡು ತಲವಾರುಗಳು ಪತ್ತೆಯಾದವು. ಪತ್ತೆಯಾದ ವಸ್ತುಗಳನ್ನು ವಶಪಡಿಸಿಕೊಂಡು, ಸಂಬಂಧಿತ ದಾಖಲೆಗಳೊಂದಿಗೆ ಮುಂದಿನ ಕಾನೂನು ಕ್ರಮಕ್ಕೆ ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಲಾಯಿತು.

ಈ ಕುರಿತು ಎಸ್ಐಟಿ ಅಧಿಕಾರಿಗಳು ಪೊಲೀಸ್ ಅಧೀಕ್ಷಕರಿಗೆ ಅಧಿಕೃತ ದೂರು ಸಲ್ಲಿಸಿದ್ದು, ಅದರ ಆಧಾರದ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸೆ.16ರಂದು ಹೊಸ ಪ್ರಕರಣ ದಾಖಲಿಸಲಾಯಿತು.

ಅಕ್ರ:108/2025 ಪ್ರಕಾರ Arms Act 1959ರ ಕಲಂ 25(1)(1-A) ಮತ್ತು 25(1)(1-B)(a) ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.
ಪ್ರಕರಣದ ಗಂಭೀರತೆಯನ್ನು ಗಮನಿಸಿ ಶಸ್ತ್ರಾಸ್ತ್ರಗಳು ಯಾವ ಮೂಲದಿಂದ ಬಂದವು, ಯಾರ ಬಳಕೆಗೆ ಇಟ್ಟಿದ್ದರು ಎಂಬುದರ ಬಗ್ಗೆ ಪೊಲೀಸರು ಆಳವಾದ ತನಿಖೆ ನಡೆಸುತ್ತಿದ್ದಾರೆ.
Previous Post Next Post